What's Happening‎ > ‎

ಪ್ರೀತಿಯ ಶ್ರೀನಾಥ್ ಅವರಿಗೆ....

posted Nov 1, 2015, 2:45 PM by TKA Executive Committee
Date: Sun, 27 Sep 2015 
 
ಪ್ರೀತಿಯ ಶ್ರೀನಾಥ್ ಅವರಿಗೆ,

Greensboro Triad Association ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
 
ಬಿಡುವಿಲ್ಲದ ತಮ್ಮ ಕಾರ್ಯಕ್ರಮಗಳ ನಡುವೆ ನಮ್ಮೊಡನೆ ನೀವು ಕಳೆದ ಕೆಲವು ತಾಸುಗಳಿಗಾಗಿ ನಮ್ಮೆಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸಲು ಅಶಿಸುತ್ತೇವೆ.
 
ಕನ್ನಡ ಚಿತ್ರರಂಗ ಕಂಡಿರುವಂತಹ ಅಭಿಜಾತ ಕಲಾವಿದರಲ್ಲಿ ಒಬ್ಬರೆನಿಸಿರುವ ತಾವು, ಯಾವುದೇ ಬಿಂಕ ಬಿಗುಮಾನವಿಲ್ಲದೆ ನಮ್ಮೆಲ್ಲರೊಡನೆ ಬೆರೆತು ಸುಮಧುರ ನೆನಪುಗಳನ್ನು ನಮಗೆ ಕೊಡುಗೆಯನ್ನಾಗಿ ನೀಡಿರುವುದಕ್ಕಾಗಿ ನಿಮಗೆ ಅನಂತಾನಂತ ಧನ್ಯವಾದಗಳು.
 
ನಿಮ್ಮೊಡನೆ ಕಳೆದ ಆ ಕೆಲವು ಗಂಟೆಗಳು 'ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲಿ, ಪಯಣಿಗ ನಾನಮ್ಮಾ' ಎಂಬ ನಿಮ್ಮ ಹಾಡಿನ ಸಾಲನ್ನು ಮತ್ತೆ ನೆನಪಿಗೆ ತರಿಸುವಂತಿತ್ತು.
 
ಭಾರತಕ್ಕೆ ಪ್ರಯಾಣ ಬೆಳೆಸಿರುವ ನಿಮಗೆ, ಶುಭ ಪ್ರಯಾಣ ಎಂದು ಹರಸುತ್ತಾ, ಬಹುಬೇಗ ಮತ್ತೊಮ್ಮೆ ತಮ್ಮನ್ನು ಕಾಣ ಬಯಸುತ್ತೇವೆ. 
 
ಇಂತಿ ನಿಮ್ಮ ಪ್ರೀತಿಯ
 
Greensboro ಕನ್ನಡಿಗರು
Comments